Home Government Orders

Management / Private Seat ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕುರಿತು ಸರ್ಕಾರದ ಆದೇಶ

Management Quota, Private Seat (Payment Seat), Government Seat ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಶುಲ್ಕ ಮರುಪಾವತಿ ಕುರಿತು ಸಮಾಜ ಕಲ್ಯಾಣ ಇಲಾಖೆಯಿಂದ ಮಹತ್ವದ ಸರ್ಕಾರದ ಆದೇಶ ಹೊರಡಿಸಲಾಗಿದೆ.

Free Document Tools Student Corner Scholarship Guides
Management / Private Seat ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕುರಿತು ಸರ್ಕಾರದ ಆದೇಶ
Advertisement
Read before you apply or check payment status

Mahiti Sindhu explains public information in simple language. Always verify final application, payment and eligibility details from the official department portal or app.

Advertisement

Management Quota ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ – 2024-25ರಿಂದ ಹೊಸ ಯೋಜನೆ

ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಪಿ.ಯು.ಸಿ., ITI, Polytechnic Diploma ಹಾಗೂ ಇತರೆ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ. ಈ ಯೋಜನೆ ಕೇಂದ್ರ ಪುರಸ್ಕೃತವಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳ್ಳುತ್ತದೆ.

Advertisement

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ Management Quota ವಿದ್ಯಾರ್ಥಿಗಳು ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ 2024-25 ಹಾಗೂ ಪೂರ್ವದ ವರ್ಷಗಳಲ್ಲಿ Management Quota ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿರಲಿಲ್ಲ.

ಅದೇ ರೀತಿ BE, B.Tech, M.Tech, B.Arch, M.Arch, MBBS, BDS, MD, MS, B.Ed ಹಾಗೂ ಇತರೆ ಕೌನ್ಸಿಲಿಂಗ್‌ ಕೋರ್ಸುಗಳಲ್ಲಿ ಸರ್ಕಾರಿ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನ ಸೌಲಭ್ಯ ಲಭ್ಯವಿತ್ತು.

ಈ ಪರಿಸ್ಥಿತಿಯಿಂದ, ಉನ್ನತ ವ್ಯಾಸಂಗ ಮಾಡಲು ಆಸಕ್ತಿ ಇದ್ದರೂ ಸರ್ಕಾರಿ ಕೋಟಾದಡಿ ಆಯ್ಕೆಯಾಗದ ವಿದ್ಯಾರ್ಥಿಗಳು ಹೆಚ್ಚಿನ ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದರು.

Advertisement

ಈ ಸಮಸ್ಯೆಯನ್ನು ಗಮನಿಸಿದ ರಾಜ್ಯ ಸರ್ಕಾರವು 2025-26ನೇ ಸಾಲಿನಿಂದ Management Quota ವಿದ್ಯಾರ್ಥಿಗಳಿಗೆ ಸಹ ಶುಲ್ಕ ಮರುಪಾವತಿ ಮಾಡುವ ಹೊಸ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.


ಯೋಜನೆಯ ಹೆಸರು:

"ಆಡಳಿತ ಮಂಡಳಿ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ"


ಯೋಜನೆಯ ಮುಖ್ಯ ಅಂಶಗಳು:

  • ಈ ಯೋಜನೆ ಮೆಟ್ರಿಕ್‌ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಹತೆಯನ್ನು ಹೊಂದಿರದ Management Quota ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.
  • ವಿದ್ಯಾರ್ಥಿಗಳಿಗೆ ನಿರ್ವಹಣಾ ವೆಚ್ಚ (Maintenance Allowance) ನೀಡಲಾಗುವುದಿಲ್ಲ.
  • ಕೇವಲ ಶುಲ್ಕ ಮರುಪಾವತಿ (Fee Reimbursement) ಮಾತ್ರ ಮಂಜೂರು ಮಾಡಲಾಗುತ್ತದೆ.
  • ಇಂಜಿನಿಯರಿಂಗ್‌, ಮೆಡಿಕಲ್‌ ಹಾಗೂ ಇತರೆ ಕೌನ್ಸಿಲಿಂಗ್‌ ಕೋರ್ಸುಗಳಲ್ಲಿ Management Quota ಮೂಲಕ ಪ್ರವೇಶ ಪಡೆದವರಿಗೆ ಅನ್ವಯಿಸುತ್ತದೆ.

ಅರ್ಹತಾ ಮಾನದಂಡಗಳು:

• ವಿದ್ಯಾರ್ಥಿ ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿರಬೇಕು.

• ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ₹10 ಲಕ್ಷ (₹10,00,000) ಮೀರಿರಬಾರದು.


ಅರ್ಜಿ ಸಲ್ಲಿಸುವ ವಿಧಾನ (Important):

• ವಿದ್ಯಾರ್ಥಿಗಳು ಕಡ್ಡಾಯವಾಗಿ SSP Portal ನಲ್ಲಿ Online ಮೂಲಕ ಅರ್ಜಿ ಸಲ್ಲಿಸಬೇಕು.

 

🔗 ಅರ್ಜಿ ಲಿಂಕ್:
https://ssp.postmatric.karnataka.gov.in

⚠️ ಗಮನಿಸಿ: 2026-27ನೇ ಸಾಲಿನ ಅರ್ಜಿ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಪ್ರಾರಂಭವಾದ ನಂತರ ಮಾತ್ರ ಅರ್ಜಿ ಸಲ್ಲಿಸಬಹುದು.

• ಎಲ್ಲಾ ವಿವರಗಳು (Course, College, Seat Type, Admission Year) ಸರಿಯಾಗಿ ನಮೂದಿಸಬೇಕು.


ಹಣ ಪಾವತಿ ವಿಧಾನ (DBT):

• ಮಂಜೂರಾದ ಶುಲ್ಕ ಮೊತ್ತವನ್ನು DBT (Direct Benefit Transfer) ಮೂಲಕ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

• ಬ್ಯಾಂಕ್ ಖಾತೆ Aadhaar Seeded ಆಗಿರಬೇಕು.


ಮುಖ್ಯ ಸೂಚನೆ (Very Important):

• ನಿಮ್ಮ ಬ್ಯಾಂಕ್ ಖಾತೆಗೆ Aadhaar seeding ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

• Aadhaar seeding ಆಗದಿದ್ದರೆ ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ ತಕ್ಷಣ ಮಾಡಿಸಿಕೊಳ್ಳಿ.

• ವೇಗವಾಗಿ Aadhaar seeding ಮಾಡಲು ಸಮೀಪದ Post Office ನಲ್ಲಿ IPPB (India Post Payments Bank) ಖಾತೆ ತೆರೆಯಬಹುದು.


ಸಾರಾಂಶ:

ಈ ಹೊಸ ಯೋಜನೆಯಿಂದ Management Quota ವಿದ್ಯಾರ್ಥಿಗಳಿಗೂ ಆರ್ಥಿಕ ನೆರವು ದೊರೆಯುತ್ತಿದ್ದು, ಹೆಚ್ಚಿನ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಂದುವರಿಸಲು ಅವಕಾಶ ಸಿಗಲಿದೆ.

Advertisement
Advertisement
🧰
Free Student Document Tools

Prepare your scholarship upload documents in minutes

Resize photo, resize signature, convert images to PDF, compress PDF and merge documents before applying for SSP, NSP, hostel admission or other government schemes.

✅ No login required ✅ Useful for SSP / NSP ✅ Mobile friendly

Was this information helpful?

Report an Issue

Send Feedback

Advertisement
Advertisement